ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ

ಕರ್ನಾಟಕ ಸರ್ಕಾರ

Back
ಇಲಾಖೆಯ ಹಿನ್ನೆಲೆ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಸ್ವಾಗತ.

  1. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ.
  • ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ.
  • ಕರ್ನಾಟಕ ಬಹುಕೌಶಲ್ಯಾಭಿವೃದ್ಧಿ ಕೇಂದ್ರ (ಕೆ.ಜಿ.ಟಿ.ಟಿ.ಐ)
  1. ರಾಷ್ಟ್ರೀಯ ಜೀವನೋಪಾಯ ಅಭಿಯಾನ
  • ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ - ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಸಂವರ್ಧನ ಸಂಸ್ಥೆ (ಕೆ.ಎಸ್‌.ಆರ್‌.ಎಲ್‌.ಪಿ.ಎಸ್)
  • ರಾಷ್ಟ್ರೀಯ ನಗರ ಜೀವನೋಪಾಯ - ದೀನ ದಯಾಳ್‌ ಅಂತ್ಯೋದಯ ರಾಷ್ಟ್ರಿಯ ನಗರ ಜೀವನೋಪಾಯ ಅಭಿಯಾನ (ಡೇ-ನಲ್ಮ್)‌

3.ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ

  • ಕೌಶಲ್ಯ ಮಿಷನ್‌
  • ವಿದ್ಯಾಪೀಠ
  • ಮೋಕ್ಷಗುಂಡಂ ವಿಶ್ವೇಶ್ವರಯ್ಯ ಮಾಸ್ಟರ್‌ ತರಬೇತಿ ಕೇಂದ್ರ
  • ಕೌಶಲ್ಯ ಶಾಲೆ

 

  1. ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್‌)
  2. ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)
  3. ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ(ಕೆ.ಎಸ್‌.ಡಿ.)
  • ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕರ್ನಾಟಕ ಕೌಶಲ್ಯಾಭಿವೃದ್ಧಿ ಪ್ರಾಧಿಕಾರವನ್ನು ಕೌಶಲ್ಯ ಪ್ರಮಾಣೀಕರಣ ಮತ್ತು ಗುಣಮಟ್ಟದ ಕಾರ್ಯದಲ್ಲಿ ಕೇಂದ್ರಿಕೃತ ಪಾತ್ರವನ್ನು ನೀಡುವ ಉದ್ದೇಶದಿಂದ ರಚಿಸಲಾಗಿದೆ.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ : -

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು, ಔದ್ಯಮಿಕ ಸೇವೆ, ಕುಶಲಕರ್ಮಿಗಳ ತರಬೇತಿ ಮತ್ತು ಶಿಶಿಕ್ಷು ತರಬೇತಿ ಯೋಜನೆಗಳನ್ನು ತರಬೇತಿ ಮಹಾ ನಿರ್ದೇಶನಾಲಯ, ನವದೆಹಲಿ, ಕೇಂದ್ರ ಸರ್ಕಾರ ಇವರು ನಿಗದಿಪಡಿಸಿರುವ ಗುಣಮಟ್ಟಗಳಿಗೆ ಅನುಗುಣವಾಗಿ ಕಾರ್ಯಗತಗೊಳಿಸುತ್ತಿದೆ . ರಾಜ್ಯದಲ್ಲಿ ಒಟ್ಟು 270 ಸರ್ಕಾರಿ, 192 ಅನುದಾನಿತ, 1030 ಅನುದಾನ ರಹಿತ ಹಾಗೂ ಎಸ್‍ಸಿವಿಟಿ ಅಡಿಯಲ್ಲಿ 3 ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ಸದರಿ ಇಲಾಖೆಯು ಎರಡು ವಿಭಾಗಗಳನ್ನು ಹೊಂದಿದೆ.

  1. ತರಬೇತಿ ವಿಭಾಗ
  2. ಉದ್ಯೋಗ ವಿಭಾಗ

ಸದರಿ ಇಲಾಖೆಯಡಿ ಕೆಳಕಂಡ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.

  • ಕೌಶಲ್ಯ ಮಿಷನ್
  • ಸಾಮಾನ್ಯ ಉದ್ಯೋಗ ವಿನಿಮಯ ಕೇಂದ್ರಗಳು
  • ಸಹಾಯಾನುದಾನ ಐ.ಟಿ.ಐ ಗಳು
  • ಔದ್ಯೋಗಿಕ ತರಬೇತಿ ಕೇಂದ್ರಗಳನ್ನು ನಿರ್ದಿಷ್ಟ ವೃತ್ತಿ ಪರಿಣಿತಿ ಕೇಂದ್ರಗಳ್ಳನ್ನಾಗಿ ಉನ್ನತೀಕರಿಸುವುದು
  • ರಾಜ್ಯ ತರಬೇತಿ ಮತ್ತು ಸಂಶೋಧನಾ ಕೇಂದ್ರ
  • ರಾಜ್ಯ ಯೋಜನಾ ಅನುಷ್ಠಾನ ಘಟಕ
  • ನೂತನ ಔದ್ಯೋಗಿಕ ತರಬೇತಿ ಸಂಸ್ಥೆ ಸ್ಥಾಪನೆ
  • ವೃತ್ತಿಪರ ತರಬೇತಿ ಸುಧಾರಣೆ ಯೋಜನೆಯಡಿ ಮಾರ್ಗದರ್ಶಿ ತರಬೇತಿ ವಿಭಾಗಗಳ ಸ್ಥಾಪನೆ(ಐ.ಟಿ.ಡಬ್ಲು)
  • ಕರ್ನಾಟಕ-ಜರ್ಮನ್ ಬಹುಕೌಶಲ್ಯ ಅಭಿವೃದ್ದಿ ಕೇಂದ್ರ
  • ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಕಾರ್ಯಕ್ರಮ
  • ಕರ್ನಾಟಕ ಅಂತರಾಷ್ಟ್ರೀಯ ವಲಸಿಗ ಕೇಂದ್ರ
  • ಐಟಿಐಗಳ ನಿರ್ಮಾಣ
  • ಸರ್‍ಎಂ.ವಿಶ್ವೇಶ್ವರಯ್ಯ ಕೌಶಲ್ಯ ಅಭಿವೃದ್ದಿಯ ಮಾಸ್ಟರ್ ತರಬೇತುದಾರರ ತರಬೇತಿ ಕೇಂದ್ರ
  • ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಅನುಷ್ಠಾನ
  • ನೈಪುಣ್ಯ ಅಭಿವೃದ್ಧಿ ಕಾರ್ಯಕ್ರಮಗಳು
  • ರಾಷ್ಟ್ರೀಯ ವೃತ್ತಿ ಸೇವೆ

ರಾಜ್ಯದಲ್ಲಿ ಒಟ್ಟು 40 ಅಧೀನ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ಉದ್ಯೋಗ ಸೇವೆಯು ಈ ಕೆಳಕಂಡ ಉದ್ದೇಶಗಳನ್ನು ಹೊಂದಿದೆ

1)   ಮಾನವ ಶಕ್ತಿ ಬೇಡಿಕೆ ಮತ್ತು ಪೂರೈಕೆಗಳು ಇವುಗಳ ನಡುವೆ ಸಮನ್ವಯ ಸಾಧಿಸುವ ದಿಸೆಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಉದ್ಯೋಗದಾತರಿಗೆ ನೆರವು ನೀಡುವುದು.

2)  ವೃತ್ತಿ ಮಾರ್ಗದರ್ಶನ ಚಟುವಟಿಕೆಗಳ ಮೂಲಕ ವಿದ್ಯಾರ್ಥಿ ಸಮುದಾಯ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಶೀಲತೆ ಹೆಚ್ಚಿಸಿಕೊಳ್ಳಲು ನೆರವು ನೀಡುವುದು.

3)  ಉದ್ಯೋಗ ಮಾರುಕಟ್ಟೆ ಮಾಹಿತಿ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನದ ಮೂಲಕ ಮಾನವ ಶಕ್ತಿ ಯೋಜನೆ ಮತ್ತು ವಿಶ್ಲೇಷಣೆಗೆ ಅನುವು ಮಾಡಿಕೊಡುವುದು.

ಖಾಸಗಿ ಹಾಗೂ ಅಸಂಘಟಿತ ವಲಯದಲ್ಲಿ ಸೃಜನೆಯಾಗುತ್ತಿರುವ ವಿಪುಲ ಉದ್ಯೋಗವಕಾಶಗಳನ್ನು ಉದ್ಯೋಗಾಕಾಂಕ್ಷಿಗಳಿಗೆ ತಲುಪಿಸಲು ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಈ ಉದ್ಯೋಗ ಮೇಳಗಳು ಖಾಸಗಿ ನಿಯೋಜಕರು ಹಾಗು ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಗೆ ತರುವುದಲ್ಲದೆ, ನೇರ ಸಂಪರ್ಕ ಕಲ್ಪಿಸಲಾಗುತ್ತಿದೆ. 

ಅಂಧರು, ಕಿವುಡರು ಮತ್ತು ವಿಶೇಷಚೇತನರು ಉದ್ಯೋಗ ಸೇವೆ ಸಲ್ಲಿಸುವ ಸಲುವಾಗಿ ಅಂಗವಿಕಲರ ವಿಶೇಷ ಉದ್ಯೋಗ ವಿನಿಮಯ ಕೇಂದ್ರ, ಬೆಂಗಳೂರಿನಲ್ಲಿದೆ. ರಾಜ್ಯದ ಸಾಮಾನ್ಯ ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ಸಹ ಅಂಗವಿಕಲರಿಗೆ ಉದ್ಯೋಗ ನೆರವು ಒದಗಿಸಲಾಗುತ್ತಿದೆ.

ಯುವಜನರ ಉದ್ಯೋಗಶೀಲತೆ ಅಭಿವೃದ್ಧಿಪಡಿಸಲು ಉದ್ದೇಶಿಸಿ U.O.A.P. ಸಹಯೋಗದೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ Youth Employability Service (YES) Centers ಗಳನ್ನು ಪ್ರಾರಂಭಿಸಲಾಗಿದೆ.

ಶ್ರೇಷ್ಠತಾ ಕೇಂದ್ರಗಳನ್ನು ವಿಶ್ವ ಬ್ಯಾಂಕ್ ಅನುದಾನಿತ ವೃತ್ತಿ ತರಬೇತಿ ಸುಧಾರಣಾ ಯೋಜನೆ (ವಿ.ಟಿ.ಐ.ಪಿ) ಕಾರ್ಯಕ್ರಮದಡಿಯಲ್ಲಿ 30 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಆಗಿ ಉನ್ನತೀಕರಿಸಲಾಗಿದೆ. ಸದರಿ ಯೋಜನೆಯನ್ನು 2006-07ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿದ್ದು, ಸೆಪ್ಟೆಂಬರ್-2018ಕ್ಕೆ ಯೋಜನೆಯು ಮುಕ್ತಾಯವಾಗಿರುತ್ತದೆ.

ಕರ್ನಾಟಕ-ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ (ಕೆ.ಜಿ.ಟಿ.ಟಿ.) :-

ಕರ್ನಾಟಕ-ಜರ್ಮನ್ ಬಹುಕೌಶಲ್ಯ ಅಭಿವೃದ್ಧಿ ಕೇಂದ್ರ(ಕೆ.ಜಿ.ಟಿ.ಟಿ.ಐ) ಸಂಸ್ಥೆಯ ಸಹಯೋಗದೊಂದಿಗೆ ಕರ್ನಾಟಕದ ಯುವಜನತೆಗೆ ವೈವಿಧ್ಯ ಕೈಗಾರಿಕಾ, ತಾಂತ್ರಿಕ ಕ್ಷೇತ್ರಗಳಲ್ಲಿ ಉದ್ಯಮಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಜರ್ಮನ್‌ ವೃತ್ತಿಪರ ಶಿಕ್ಷಣದ ಪದ್ಧತಿಯನ್ನು ಅಳವಡಿಸಿಕೊಂಡು ವೃತ್ತಿಪರ ತರಬೇತಿಯನ್ನು ನೀಡುವ ಮೂಲಕ ವಿದೇಶಗಳಲ್ಲಿ ಉದ್ಯೋಗಾವಕಾಶ ದೊರಕುವಂತೆ ಮಾಡುವುದು ಸಂಸ್ಥೆಯ ಉದ್ದೇಶ ಹಾಗೂ ಈ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪತ್ರವನ್ನು ಪಡೆಯುವ ತರಬೇತಿಯನ್ನು ಪ್ರಾರಂಭಿಸಲಾಗಿದೆ. ಸದರಿ ಸಂಸ್ಥೆಯು 5 ಕೇಂದ್ರಗಳನ್ನು ಹೊಂದಿದೆ(ಬೆಂಗಳೂರು, ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ ಮತ್ತು ಮಂಗಳೂರು).

ಕೌಶಲ್ಯ ಮಿಷನ್ : -

  1. ರಾಜ್ಯ ಕೌಶಲ್ಯ ಮಿಷನ್
  2. ಜಿಲ್ಲಾ ಕೌಶಲ್ಯ ಮಿಷನ್
  3. ತಾಲ್ಲೂಕು ಕೌಶಲ್ಯ ಮಿಷನ್

ರಾಜ್ಯ ಮಟ್ಟದಲ್ಲಿ ಕರ್ನಾಟಕ ಕೌಶಲ್ಯ ಮಿಷನ್ :-

ಮಾನ್ಯ ಮುಖ್ಯಮಂತ್ರಿಯವರು ಕರ್ನಾಟಕ ಸರ್ಕಾರ ಇವರು ಕರ್ನಾಟಕ ಕೌಶಲ್ಯ ಮಿಷನ್‌ನ ಅಧ್ಯಕ್ಷರಾಗಿದ್ದು, ಸದರಿ ಸಮಿತಿಯಲ್ಲಿ ಒಟ್ಟು 27 ಸದಸ್ಯರು ಇರುತ್ತಾರೆ.

ಜಿಲ್ಲಾ ಮಟ್ಟದಲ್ಲಿ ಕರ್ನಾಟಕ ಕೌಶಲ್ಯ ಮಿಷನ್ :-

ರಾಜ್ಯದ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಜಿಲ್ಲಾ ಕೌಶಲ್ಯ  ಮಿಷನ್‌ ಅಧ್ಯಕ್ಷರಾಗಿರುತ್ತಾರೆ. ಈ ಸಮಿತಿಯಲ್ಲಿ ಒಟ್ಟು 20 ಸದಸ್ಯರು ಇರುತ್ತಾರೆ. 

ತಾಲ್ಲೂಕು ಮಟ್ಟದಲ್ಲಿ ಕರ್ನಾಟಕ ಕೌಶಲ್ಯ ಮಿಷನ್ :-

ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಸಹಾಯಕ ಆಯುಕ್ತರು, ತಾಲ್ಲೂಕು ಕೌಶಲ್ಯ  ಮಿಷನ್‌ ಅಧ್ಯಕ್ಷರಾಗಿರುತ್ತಾರೆ. ಈ ಸಮಿತಿಯಲ್ಲಿ ಒಟ್ಟು 9 ಸದಸ್ಯರು ಇರುತ್ತಾರೆ. 

ಕೌಶಲ್ಯ ಮಿಷನ್ ವತಿಯಿಂದ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯನ್ನು  2017-18ರಲ್ಲಿ ಪ್ರಾರಂಭಿಸಿದ್ದು, ಈ ಯೋಜನೆಯ ಮುಖ್ಯ ಉದ್ದೇಶ ಕರ್ನಾಟಕದ ಯುವಜನತೆಗೆ ಉಚಿತವಾಗಿ ಕೌಶಲ್ಯ ತರಬೇತಿಯನ್ನು ನೀಡುವುದು. ಈ ಉದ್ದೇಶಕ್ಕಾಗಿ www.kaushalkar.com  ವೆಬ್ ಪೋರ್ಟಲ್ ನ್ನು  ಪ್ರಾರಂಭಿಸಲಾಗಿದೆ. ವೆಬ್‌ ಪೋರ್ಟಲ್ ನಲ್ಲಿ  ತರಬೇತುದಾರರು,ತರಬೇತಿ ಆಕಾಂಕ್ಷಿಗಳು ,ತರಬೇತಿ ಸಂ‍ಸ್ಥೆ ಮತ್ತು ತರಬೇತಿ ಕೇಂದ್ರಗಳನ್ನು ನೊಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯಮಂತ್ರಿಗಳ ಕೌಸಲ್ಯ ಕರ್ನಾಟಕ ಯೋಜನೆಯಡಿ 18 ರಿಂದ 35 ವರ್ಷದ ಯುವಜನತೆ ಕೌಶಲ್ಯ ತರಬೇತಿ ಸ್ವಯಂಉದ್ಯೋಗ, ಉದ್ಯಮಶೀಲತೆ ಶಿಶಿಕ್ಷು ಮತ್ತು ಉದ್ಯೋಗವಕಾಶವನ್ನು ಕಲ್ಪಿಸಲು ರೂಪಿಸಲಾಗಿದೆ ಇಲ್ಲಿಯವರೆಗೆ 8.94 ಲಕ್ಷ ಅಭ್ಯರ್ಥಿಗಳು ಪೋರ್ಟಲ್ ನಲ್ಲಿ ನೊಂದಣಿ ಮಾಡಿಕೊಂಡಿರುತ್ತಾರೆ.

ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯನ್ನು  2018-19ನೇ ಸಾಲಿನಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಈ ಯೋಜನೆಯು 30,000 ಅಭ್ಯರ್ಥಿಗಳ ಭೌತಿಕಗುರಿಯನ್ನು ಹೊಂದಿದೆ.ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಕೌಶಲ್ಯ ಮಿಷನ್ ಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕೌಶಲ್ಯ ಮಿಷನ್ ವತಿಯಿಂದ 30 ಜಿಲ್ಲೆಗಳಲ್ಲಿ ಸರ್ಕಾರಿ ಆದೇಶದನ್ವಯ ಬೃಹತ್ ಮತ್ತು ಮಿನಿ ಉದ್ಯೋಗ ಮೇಳಗಳನ್ನು ಅಯೋಜಿಸಲಾಗುತ್ತಿದೆ.

ವಿಸರ್ಜಿತ ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಅಡಿಯಲ್ಲಿ ಇದ್ದಂತಹ 16 ವಿದ್ಯಾಪೀಠಗಳ ಚರಾಸ್ಥಿ ಮತ್ತು ಸ್ಥಿರಾಸ್ತಿಯು ಸೇರಿದಂತೆ 35 ಸಿಬ್ಬಂದಿಗಳನ್ನು ಕೌಶಲ್ಯ ಮಿಷನ್ ನಡಿ ಅನುಷ್ಠಾನಗೊಳಿಸಲಾಗುತ್ತಿದೆ.

ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ

ರಾಷ್ಟ್ರೀಯ ಕೌಶಲ್ಯ ಆಯೋಗ/ರಾಜ್ಯ ಕೌಶಲ್ಯ ಆಯೋಗದ ಶಿಫಾರಸ್ಸುಗಳನ್ನು ಹಾಗೂ ಕೌಶಲ್ಯ ಅಭಿವೃದ್ಧಿ ನೀತಿಯ ಉದ್ದೇಶಗಳನ್ನು ಅನುಷ್ಠಾನಗೊಳಿಸಲು, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮವನ್ನು ದಿನಾಂಕ: 12.09.2008 ರಂದು ಸ್ಥಾಪನೆ ಮಾಡಲಾಯಿತು. ಈ ನಿಗಮವು ರಾಜ್ಯ ಕೌಶಲ್ಯ ನೀತಿಯ ಶಿಫಾರಸ್ಸುಗಳನ್ನು ಹಾಗೂ ಉದ್ದೇಶಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ವಿಶಿಷ್ಟ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.ಈ ನಿಗಮವು ಮೂಂದಿನ 2020 ರವರೆಗೆ 15 ಲಕ್ಷ ಉದ್ಯೋಗಾಂಕ್ಷಿಗಳಿಗೆ ತರಬೇತಿ ಗುರಿಯನ್ನು ಹೊಂದಿದೆ.

ವಿದೇಶಿ ಉದ್ಯೋಗ ಕೋಶ

ಸರ್ಕಾರದ ಆದೇಶ ಸಂಖ್ಯೆ : ಕೌಉಜೀಇ 85 ಕೈತಇ 2018 ಬೆಂಗಳೂರು ದಿನಾಂಕ: 21.03.2018 ರನ್ವಯ ರಾಜ್ಯದಲ್ಲಿ ವಿದೇಶಿ ಉದ್ಯೋಗ ಕೋಶವನ್ನು ಸ್ಥಾಪಿಸಲು ಆದೇಶವನ್ನು ಹೊರಡಿಸಲಾಗಿರುತ್ತದೆ.ಪಬ್ಲಿಕ್ ಅಫೇರ್ ಸೆಂಟರ್ (ಪಿಎಸಿ) ಅನ್ನು ಪ್ರಾಜೆಕ್ಟ್ ಮಾನಿಟರಿಂಗ್ ಯುನಿಟ್ (ಪಿಎಂಯು) ಆಗಿ ನೇಮಿಸಲಾಗಿದೆ. ಪ್ರಸ್ತುತ ವರ್ಷದಲ್ಲಿ ರೂ.2.00ಕೋಟಿಗಳ ಅನುದಾನ ಹಂಚಿಕೆಯಾಗಿರುತ್ತದೆ.

ರಾಷ್ಟ್ರೀಯ ಜೀವನೋಪಾಯ ಅಭಿಯಾನ:-

ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಒಂದೇ ಉದ್ದೇಶ ನೀಡಿದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ 2 ಜೀವನೋಪಾಯ ಅಭಿಯಾನಗಳನ್ನು ಉತ್ತಮ ಫಲಾಶೃತಿಯನ್ನು ಪಡೆಯಲು ಏಕೈಕ ಅಭಿಯಾನದಡಿಯಲ್ಲಿ ತರಲಾಗಿದೆ.

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (“ಸಂಜೀವಿನಿ”-        ಕೆ ಎಸ್ಆರ್ಎಲ್ಪಿ ಎಸ್)

ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಎಸ್‍ಜಿಎಸ್‍ವೈ ಯೋಜನೆಯನ್ನು ಪುನರ್ ರಚಿಸಿ ಆಜೀವಿಕ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‍ಆರ್‍ಎಲ್‍ಎಂ) 2010-11ರಿಂದ ಜಾರಿಗೊಳಿಸಿದೆ.  ಇದರನ್ವಯ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆಜೀವಿಕ ಯೋಜನೆಯನ್ನು “ಸಂಜೀವಿನಿ” ಹೆಸರಿನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಕೆಎಸ್‍ಆರ್‍ಎಲ್‍ಪಿಎಸ್) ಮೂಲಕ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ.

  • ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ- (ಕೇಂದ್ರ ಪುರಸ್ಕೃತ ಯೋಜನೆ -60:40)

ಈ ಯೋಜನೆಯಡಿಯಲ್ಲಿ ರಾಜ್ಯದಲ್ಲಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ಯೋಜನಾ ಅನುಷ್ಠಾನ ಸಂಸ್ಥೆಗಳಿಂದ ತರಬೇತಿ ನೀಡಿ, ವೇತನಾಧಾರಿತ ಉದ್ಯೋಗ ಒದಗಿಸುವುದು ಮತ್ತು ತರಬೇತಿ ಸಮಯದಲ್ಲಿ ಅಭ್ಯರ್ಥಿಗಳಿಗೆ ಉಚಿತ ವಸತಿ, ಊಟ ಮತ್ತು ಸಮವಸ್ತ್ರ ನೀಡಲಾಗುತ್ತದೆ.

  • ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಷನ್- ಎನ್‍ಆರ್‍ಎಲ್‍ಎಮ್ (ಕೇಂದ್ರ ಪುರಸ್ಕøತ ಯೋಜನೆ -60:40) ಗ್ರಾಮೀಣ ಭಾಗದ ಬಡ ಕುಟುಂಬದ ಮಹಿಳೆಯರನ್ನು ಗುರುತಿಸಿ. ಸ್ವಸಹಾಯ ಸಂಘ ರಚನೆ, ಸ್ವಸಹಾಯ ಸಂಘಗಳಿಗೆ ತರಬೇತಿ, ವಾರ್ಡ್ ಮತ್ತು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ರಚನೆ ಮತ್ತು ತರಬೇತಿ, ಸುತ್ತುನಿಧಿ, ಸಮುದಾಯ ಬಂಡವಾಳ ನಿಧಿಯನ್ನು ನೀಡಿ ಅವರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸದೃಢರನ್ನಾಗು ಮಾಡಿ ಬಡತನದಿಂದ ಮೇಲೆ ತರುವುದು. 10,000 ಸ್ವಸಹಾಯ ಸಂಘಗಳಿಗೆ ಸಮುದಾಯ ಬಂಡವಾಳ ನಿಧಿ, 25,000 ಸ್ವಸಹಾಯ ಸಂಘಗಳಿಗೆ ಸುತ್ತುನಿಧಿ ನೀಡುವ ಗುರಿ ಹೊಂದಲಾಗಿದೆ.
  • ಗ್ರಾಮೀಣ ಉದ್ದಿಮೆ ತರಬೇತಿ ಕೇಂದ್ರಗಳು (ಆರ್‍ಸೆಟಿ)

ರಾಜ್ಯದಲ್ಲಿ ಒಟ್ಟು 33 ಆರ್‍ಸೆಟಿಗಳಿದ್ದು, ಗ್ರಾಮೀಣ ನಿರುದ್ಯೋಗಿಗಳಿಗೆ ‘ಸ್ವ ಉದ್ಯೋಗ ತರಬೇತಿ’ ಸ್ವ ಉದ್ಯೋಗ ಅಥವಾ ದಿನಗೂಲಿ ಆಧಾರಿತ ಉದ್ಯೋಗಕ್ಕಾಗಿ ಅಥವಾ ಔಪಚಾರಿಕ ವೇತನ ಸಹಿತ ಉದ್ಯೋಗಕ್ಕಾಗಿ ಬೇಕಾಗುವ ಕೌಶಲ್ಯ ತರಬೇತಿ ನೀಡಿ ಬ್ಯಾಂಕ್ ಸಾಲ ಒದಗಿಸಲು ಸಹಾಯ ಮಾಡುವುದು.

  • ಮಹಿಳಾ ಕಿಸಾನ್ ಸಶಕ್ತೀಕರಣ ಪರಿಯೋಜನೆ (ಎಂಕೆಎಸ್‍ಪಿ)

ಕೃಷಿಕ ಮಹಿಳೆಯರಿಗೆ ಕೃಷಿ ಸಂಬಂಧಿಸಿದ ತರಬೇತಿ ಹಾಗೂ ಮಾರುಕಟ್ಟೆ ವ್ಯವಸ್ಥೆ ಒದಗಿಸುವುದು.

  • ಸಾಗರಮಾಲ ಯೋಜನೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ:

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸೂಚನೆಗಳನ್ವಯ ಹಾಗೂ ನಿರ್ದೇಶನಗಳಿಗನುಸಾರ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ “ಸಾಗರ ಮಾಲ” ಎಂಬ ಯೋಜನೆಯನ್ನು ಡಿಡಿಯು-ಜಿಕೆವೈ ಅಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಕೌಶಲ್ಯ ಅಭಿವೃದ್ಧಿಯೊಂದಿಗೆ ಉದ್ಯೋಗ ದೊರಕಿಸಿಕೊಡುವುದನ್ನು National Shipping Corporation & Development ಸಂಸ್ಥೆಯಡಿ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇದರ ಮುಖ್ಯ ಗುರಿ ಎಂದರೆ ಹಡಗು ನಿರ್ವಹಣೆ ಮತ್ತು ಬಂದರುಗಳ ಸಮಗ್ರ ಅಭಿವೃದ್ಧಿ ಯೋಜನೆ ಮತ್ತು ಕೈಗಾರಿಕಾ ವಲಯಗಳಲ್ಲಿ ಚಾಲಕರು, ತಾಂತ್ರಿಕರು, ಆರ್ಥಿಕ ವಲಯ ಪ್ರದೇಶಗಳಲ್ಲಿನ ಸಹಾಯಕರನ್ನು ಆಯ್ಕೆ ಮಾಡಿ ಕರಾವಳಿ ಪ್ರದೇಶಗಳಲ್ಲಿನ ಬಂದರುಗಳಲ್ಲಿ ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವುದಾಗಿದೆ.

ರಾಷ್ಟ್ರೀಯ ಜೀವನೋಪಾಯ ಅಭಿಯಾನ:-

ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ:- ದೀನದಯಾಳ್ ಅಂತ್ಯೋದಯ    (ಡೇ-ನಲ್ಮ್)

 

ಕೇಂದ್ರ ವಸತಿ ಮತ್ತು ನಗರ ಬಡನತ ನಿರ್ಮೂಲನಾ ಮಂತ್ರಾಲಯ, ಭಾರತ ಸರ್ಕಾರವು 1997ರಲ್ಲಿ ಸ್ವರ್ಣ ಜಯಂತಿ ಶಹರಿ ರೋಜ್‍ಗಾರ್ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಸದರಿ ಯೋಜನೆಯನ್ನು ಸೆಪ್ಟೆಂಬರ್ 2013 ರಿಂದ 2016 ರವರೆಗೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಿ ಅನುಷ್ಟಾನಗೊಳಿಸಲಾಗಿತ್ತು ಹಾಗೂ ಸದರಿ ಯೋಜನೆಯನ್ನು ದೀನದಯಾಳ್ ಅಂತ್ಯೋದಯ ಯೋಜನಾ - ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಎಂದು ಮರುನಾಮಕರಣ ಮಾಡಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ.

ಸದರಿ ಯೋಜನೆಯನ್ನು ರಾಜ್ಯದ 11 ಮಹಾನಗರ ಪಾಲಿಕೆ, 57 ನಗರಸಭೆ, 113 ಪುರಸಭೆ ಮತ್ತು 90 ಪಟ್ಟಣ ಪಂಚಾಯಿತಿಗಳನ್ನೊಳಗೊಂಡು ಒಟ್ಟು 271 ನಗರ/ಪಟ್ಟಣ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಯೋಜನೆಯ ಮುಖ್ಯ ಉದ್ದೇಶಗಳು:

  • ನಗರದ ಬಡಜನರನ್ನು ಬಡತನ ರೇಖೆಯಿಂದ ಮೇಲೆ ತರುವುದು.
  • ನಗರ ಪ್ರದೇಶದ ಮಹಿಳಾ ಸ್ವ-ಸಹಾಯ ಸಂಘ, ನಗರ/ಪ್ರದೇಶ ಮಟ್ಟದ ಒಕ್ಕೂಟಗಳ ರಚನೆ ಮತ್ತು ಸದಸ್ಯರ ಸಬಲೀಕರಣ.
  • ನಗರದ ನಿರುದ್ಯೋಗ ಯುವಕ ಯುವತಿಯರಿಗೆ ಉಚಿತವಾಗಿ ಉದ್ಯೋಗಾಧರಿತ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡುವುದು.
  • ನಗರ ಪ್ರದೇಶದಲ್ಲಿನ ಬಡವರಿಗೆ ವೈಯಕ್ತಿಕ ಮತ್ತು ಗುಂಪು ಕಿರು ಉದ್ದಿಮೆಯನ್ನು ಸ್ಥಾಪಿಸಲು ಬ್ಯಾಂಕುಗಳಿಂದ ಸಾಲ ಮತ್ತು ಬಡ್ಡಿ ಸಹಾಯಧನವನ್ನು ಒದಗಿಸುವುದು.
  • ನಗರ ಪ್ರದೇಶದ ಬೀದಿ ವ್ಯಾಪಾರಸ್ಥರನ್ನು ಗುರುತಿಸಿ, ಗುರುತಿನ ಚೀಟಿ ವಿತರಣೆ ಹಾಗೂ ಇತರೆ ಸಾಮಾಜಿಕ ಭದ್ರತಾ ಯೋಜನೆಗಳೊಂದಿಗೆ ಸಂಪರ್ಕ ಕಲ್ಪಿಸುವುದು.
  • ನಗರ ಪ್ರದೇಶದ ವಸತಿರಹಿತರಿಗೆ 24*7 ವಸತಿ ತಂಗುದಾಣವನ್ನು ಒದಗಿಸುವುದು.

ನಗರದ ಬಡ ವರ್ಗದ ಜನರು - ನಗರದ ವಸತಿ ರಹಿತರು - ನಗರದ ಬೀದಿ ಬದಿ ವ್ಯಾಪಾರಸ್ಥರು - ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಜನರು - ಮಹಿಳೆಯರು - ಅಲ್ಪಸಂಖ್ಯಾತರು - ವಿಕಲಚೇತನರು ಈ ಯೋಜನೆಯ ಮುಖ್ಯ ಫಲಾನುಭವಿಗಳಾಗಿರುತ್ತಾರೆ. 

ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್)‌ , ಧಾರವಾಡ

ಸಿಡಾಕ್‌ ಸಂಸ್ಥೆಯು ಕೈಗಾರಿಕೆ  ಮತ್ತು  ವಾಣಿಜ್ಯ  ಇಲಾಖೆಯಿಂದ ಕರ್ನಾಟಕ ಸೊಸೈಟಿ  ಆ್ಯಕ್ಟ್  - 1960  ಸಮಸಂಖ್ಯೆ  2/92-93  ರನ್ವಯ  15.05.1992ರಂದು  ಸ್ಥಾಪನೆಗೊಂಡಿರುತ್ತದೆ. ಸಿಡಾಕ್ ಸಂಸ್ಥೆಯ ಉದ್ದೇಶಗಳು ಈ ಕೆಳಗಿನಂತಿವೆ

  • ಶಿಕ್ಷಣ ಹಾಗೂ ತರಬೇತಿಯ ಮೂಲಕ ಉದ್ಯಮಶೀಲತೆಯನ್ನು ಅಧಿಕಗೊಳಿಸುವುದು.
  • ಸ್ವ-ಉದ್ಯೋಗ ಅವಕಾಶಗಳ ಮೇಲೆ ಗುಣಾಕಾರಾತ್ಮಕ ಪರಿಣಾಮವನ್ನು ಬೀರುವುದು.
  • ಸಣ್ಣ ಪ್ರಮಾಣದ ಉದ್ದಿಮೆಗಳ ನಿರ್ವಹಣಾ ಸಾಮರ್ಥ್ಯವನ್ನು ಸುಧಾರಣೆಗೆ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
  • ಉದ್ಯಮಶೀಲತೆಯು ವ್ಯಾಪಕವಾಗಿ ಹರಡಲು ಅವಶ್ಯವಿರುವ ಮಾಹಿತಿಯನ್ನು ಒದಗಿಸುವುದು.
  • ಉದ್ಯಮಶೀಲತೆಗೆ ಪೂರಕವಾಗಿ ಉಳಿತಾಯ, ಬಂಡವಾಳ ಹೂಡಿಕೆ, ಖರ್ಚು ಕಡಿಮೆ ಮಾಡುವ ಬಗ್ಗೆ ಹಾಗೂ ಹಣಕಾಸಿನ ವ್ಯವಹಾರದ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
  • ಉದ್ಯಮಶೀಲತೆಯ ಪಠ್ಯ ಹಾಗೂ ಪ್ರಯೋಗಗಳ ಜ್ಞಾನ ಹಾಗೂ ಅಂತ: ಸತ್ವವನ್ನು ಸಂಶೋಧನೆಯ ಮೂಲಕ ಸೃಷ್ಟಿಸುವುದು ಹಾಗೂ ಪ್ರಚಾರ ಪಡಿಸುವುದು.
  • ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಉದ್ಯಮಶೀಲತಾಭಿವೃದ್ಧಿ ಹಾಗೂ ಸಾಮಥ್ರ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಈ ಫಲಾನುಭವಿಗಳಿಗೆ ವ್ಯವಸ್ಥಿತವಾಗಿ ತರಬೇತಿ ನೀಡಲು ಅಂತರಾಷ್ಟೀಯ ಮಟ್ಟದ ಸೌಕರ್ಯ ಕಲ್ಪಿಸುವುದು.
  • ಉದ್ಯಮಶೀಲತಾಭಿವೃದ್ಧಿಗೆ ತರಬೇತುದಾರರು ಹಾಗೂ ಮನವೊಲಿಸುವವರನ್ನು ಅಧಿಕಗೊಳಿಸುವುದು.
  • ಅಂತರರಾಷ್ಟ್ರೀಯ ಹಾಗೂ ವಿದೇಶೀಯ ಸಂಸ್ಥೆಗಳ ಸಹಯೋಗ ಹೊಂದಿ, ಅಭಿವೃದ್ಧಿಶೀಲ ದೇಶದ ಪ್ರತಿನಿಧಿಗಳಿಗೆ ಕಾರ್ಯಕ್ರಮಗಳನ್ನು ಆಯೋಜಿಸುವುದು.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ [ಜಿಟಿಟಿಸಿ]

ಜಿಟಿಟಿಸಿ ಸಂಸ್ಥೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಡೆನ್ಮಾರ್ಕ್ ಸರ್ಕಾರದ ನಡುವಿನ ಒಂದು ಒಪ್ಪಂದಕ್ಕನುಗುಣವಾಗಿ 1972ರಲ್ಲಿ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಲಾಯಿತು. 

ತರಬೇತಿ ಸಂಸ್ಥೆಯನ್ನು ಪ್ರಮುಖ ಉದ್ದೇಶವೆನೆಂದರೆ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಿ ಜಾಗತೀಕ ಮಟ್ಟದಲ್ಲಿ ಉದ್ಯೋಗಾವಕಾಶವನ್ನು ಕಲ್ಪಿಸಿಸುವುದು ಮತ್ತು ನುರಿತ ಮಾನವ ಸಂಪನ್ಮೂಲವನ್ನು ಕೈಗಾರಿಕಾ ಕ್ಷೇತ್ರಕ್ಕೆ ಒದಗಿಸುವುದು ಅಲ್ಲದೇ ಕೈಗಾರಿಕಾ ಸಂಸ್ಥೆಗಳ ಅಭಿವೃದ್ಧಿಗೆ ತಂತ್ರಜ್ಞಾನ ಮತ್ತು ತರಬೇತಿಗಳ ನೆರವು ನೀಡುವುದು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 28 ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ 1]ಬೆಂಗಳೂರು, 2]ಮೈಸೂರು, 3]ಗುಂಡ್ಲುಪೇಟೆ, 4]ಮದ್ದೂರು, 5]ಹಾಸನ, 6]ಕಡೂರು, 7]ಹುಮ್ನಾಬಾದ್, 8]ಗುಲಬರ್ಗಾ, 9]ಕೂಡಲಸಂಗಮ, 10]ಬೆಳಗಾವಿ, 11]ಧಾರವಾಡ 12]ಹುಬ್ಬಳ್ಳಿ, 13]ದಾಂಡೇಲಿ, 14]ಮಂಗಳೂರು, 15]ಹೊಸಪೇಟೆ, 16]ಲಿಂಗಸುಗೂರು, 17]ಹರಿಹರ, 18]ಕನಕಪುರ, 19]ತುಮಕೂರು, 20]ಕೊಲಾರ, 21]ಶಿವಮೊಗ್ಗ ಹಾಗೂ 22]ಗೌರಿಬಿದನೂರು 23] ಉಡುಪಿ 24]ಕೊಪ್ಪಳ 25]ಯಾದಗಿರಿ 26]ಚಳ್ಳಕೆರೆ 27]ಚಿತ್ರದುರ್ಗ 28]ಗೋಕಾಕ್‌

ಮಾನ್ಯ ಮುಖ್ಯಮಂತ್ರಿಗಳ 2016-17ನೇ ಆಯವ್ಯಯದ ಭಾಷಣದಲ್ಲಿ ಜಿಟಿಟಿಸಿ ಸಂಸ್ಥಯ 4 ಕೇಂದ್ರಗಳಾದ ಬೆಂಗಳೂರು, ಮೈಸೂರು, ದಾಂಡೇಲಿ ಮತ್ತು ಕಲಬುರ್ಗಿಗಳಲ್ಲಿ ಸೀಮೆನ್ಸ್ ಇಂಡಸ್ಟ್ರೀ ಸಾಫ್ಟ್‍ವೇರ್ ಮತ್ತು ಡಿಸೈನ್‍ಟೆಕ್ ಸಿಸ್ಟಮ್ ಲಿಮಿಟೆಡ್ ರವರು ಸ್ಕಿಲ್ ಡೆವೆಲಪಮೆಂಟ್ ಇನಿಷಿಯೆಟಿವ್ ಉದ್ಯಮ ಪಾಲುದಾರಿಕೆಯಡಿಯಲ್ಲಿ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲು ಆಡಳಿತಾತ್ಮಕ ಅನುಮೊದನೆಯನ್ನು ನೀಡಲಾಗಿದೆ.

×
ABOUT DULT ORGANISATIONAL STRUCTURE PROJECTS