ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ

ಕರ್ನಾಟಕ ಸರ್ಕಾರ

Back
ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (ಪಿಎಂಕೆವಿವೈ)

ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (ಪಿಎಂಕೆವಿವೈ) ಯು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯ, ಭಾರತ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯ ಉದ್ದೇಶವು ಹೆಚ್ಚಿನ ಸಂಖ್ಯೆಯ ಭಾರತೀಯ ಯುವಜನರಿಗೆ ಉದ್ಯಮಾಧಾರಿತ ಕೌಶಲ್ಯ ತರಬೇತಿಯನ್ನುಪಡೆಯಲು ಅನುವು ಮಾಡಿಕೊಡುತ್ತದೆ ಹಾಗೂ ಉತ್ತಮ ಜೀವನೋಪಾಯವನ್ನು ಹೊಂದಲು ಸಹಾಯ ಮಾಡುತ್ತದೆ. ಈಗಾಗಲೇ ಪೂರ್ವ ಕಲಿಕೆಯ ಅನುಭವ ಅಥವಾ ಕೌಶಲ್ಯಗಳನ್ನು  ಹೊಂದಿರುವ ವ್ಯಕ್ತಿಗಳನ್ನು  ಪೂರ್ವ ಕಲಿಕೆಯ ಗುರುತಿಸುವಿಕೆ (ಆರ್‌ಪಿಎಲ್) ಅಡಿಯಲ್ಲಿ ಪ್ರಮಾಣೀಕರಿಸಲಾಗುತ್ತದೆ. ಈ ಯೋಜನೆಯಡಿ, ತರಬೇತಿ ಮತ್ತು ಮೌಲ್ಯಮಾಪನ ಶುಲ್ಕವನ್ನು ಸರ್ಕಾರವು ಸಂಪೂರ್ಣವಾಗಿ ಭರಿಸುತ್ತದೆ.

ಯೋಜನೆಯ ಪ್ರಮುಖ ಘಟಕಗಳು:

    ಅಲ್ಪಾವಧಿಯ ತರಬೇತಿ
    ಪಿಎಂಕೆವಿವೈ ತರಬೇತಿ ಕೇಂದ್ರಗಳಲ್ಲಿ (ಟಿಸಿ) ನೀಡಲಾಗುವ ಅಲ್ಪಾವಧಿಯ ತರಬೇತಿಯು  ಶಾಲಾ / ಕಾಲೇಜುಗಳನ್ನು ಮಧ್ಯದಲ್ಲಿ ಬಿಟ್ಟ ಅಥವಾ ನಿರುದ್ಯೋಗಿಯಾದ ಯುವಕ/ಯುವತಿಯರಿಗೆ ಅನುಕೂಲವಾಗಲು ನೀಡಲಾಗುತ್ತದೆ. ತರಬೇತಿ ಕೇಂದ್ರಗಳು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನ (ಎನ್‌ಎಸ್‌ಕ್ಯೂಎಫ್) ಪ್ರಕಾರ ತರಬೇತಿ ನೀಡುವುದರ ಜೊತೆಗೆ,  ಮೃದು ಕೌಶಲ್ಯ, ಉದ್ಯಮಶೀಲತೆ, ಹಣಕಾಸು ಮತ್ತು ಡಿಜಿಟಲ್ ಸಾಕ್ಷರತೆಯಲ್ಲೂ ತರಬೇತಿ ನೀಡುತ್ತವೆ. ತರಬೇತಿಯ ಅವಧಿ ಪ್ರತಿ ಜಾಬ್‌ ರೋಲ್‌ ಗೆ 150 ರಿಂದ 300 ಗಂಟೆಗಳಾಗಿರುತ್ತದೆ.ಅಭ್ಯರ್ಥಿಗಳ ಮೌಲ್ಯಮಾಪನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ,  ತರಬೇತಿ ಸಂಸ್ಥೆಗಳು ಉದ್ಯೋಗ ನಿಯೋಜನೆಗೆ ನೆರವು ನೀಡುತ್ತಾರೆ. ಪಿಎಂಕೆವಿವೈ ಅಡಿಯಲ್ಲಿ, ಸಂಪೂರ್ಣ ತರಬೇತಿ ಮತ್ತು ಮೌಲ್ಯಮಾಪನ ಶುಲ್ಕವನ್ನು ಸರ್ಕಾರ ಪಾವತಿಸುತ್ತದೆ.

  ಪೂರ್ವ ಕಲಿಕೆಯ ಗುರುತಿಸುವಿಕೆ(ಆರ್‌ ಪಿ ಎಲ್)

     ಈಗಾಗಲೇ ಪೂರ್ವ ಕಲಿಕೆಯ ಅನುಭವ ಅಥವಾ ಕೌಶಲ್ಯವನ್ನು ಹೊಂದಿರುವ ವ್ಯಕ್ತಿಗಳನ್ನು (ಆರ್‌ಪಿಎಲ್) ಘಟಕದ ಅಡಿಯಲ್ಲಿ ಮೌಲ್ಯಮಾಪನ ಮತ್ತು ಪ್ರಮಾಣೀಕರಿಸಲಾಗುತ್ತದೆ.ಆರ್‌ಪಿಎಲ್ ದೇಶದ ಅನಿಯಂತ್ರಿತ ಕಾರ್ಯಪಡೆಯ ಸಾಮರ್ಥ್ಯಗಳನ್ನು ಎನ್‌ಎಸ್‌ಕ್ಯೂಎಫ್‌ ನೊಂದಿಗೆ ಜೋಡಿಸುವ ಗುರಿಯನ್ನು ಹೊಂದಿದೆ. ಯೋಜನಾ ಅನುಷ್ಠಾನ ಏಜೆನ್ಸಿಗಳು ,ಸೆಕ್ಟರ್ ಸ್ಕಿಲ್ ಕೌನ್ಸಿಲ್‌ಗಳು ಯಾವುದೇ ಮೂರು ಪ್ರಾಜೆಕ್ಟ್ ಪ್ರಕಾರಗಳಲ್ಲಿ(ಆರ್‌ಪಿಎಲ್ ಕ್ಯಾಂಪ್‌ಗಳು, ಉದ್ಯೋಗದಾತ ಆವರಣದಲ್ಲಿ ಆರ್‌ಪಿಎಲ್ ಮತ್ತು ಆರ್‌ಪಿಎಲ್ ಕೇಂದ್ರಗಳಲ್ಲಿ) ಆರ್‌ಪಿಎಲ್ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರೋತ್ಸಾಹಿಸಲಾಗುವುದು.

ವಿಶೇಷ ಯೋಜನೆಗಳು
       ಪಿಎಂಕೆವಿವೈನ ವಿಶೇಷ ಯೋಜನೆಯ ಘಟಕದ ಕ್ವಾಲಿಟಿ ಪ್ಯಾಕ್‌ / ನ್ಯಾಷನಲ್‌ ಅಕ್ಯೋಪೇಷನ್‌ ಸ್ಟಾಂಡರ್ಡಗಳಲ್ಲಿ  ವ್ಯಾಖ್ಯಾನಿಸದ ವಿಶೇಷ ಜ್ಯಾಬ್‌ ರೋಲ್‌ಗಳಲ್ಲಿ ವಿಶೇಷ ಪ್ರದೇಶಗಳು , ಸರ್ಕಾರಿ ಸಂಸ್ಥೆಗಳು, ಕಾರ್ಪೊರೇಟ್‌ಗಳು ಅಥವಾ ಕೈಗಾರಿಕಾ ಸಂಸ್ಥೆಗಳ ಆವರಣಗಳಲ್ಲಿ ತರಬೇತಿ ನೀಡಲು ಅನುಕೂಲವಾಗುವಂತಹ ವೇದಿಕೆಯೊಂದನ್ನು ರೂಪಿಸಲು ಉದ್ದೆಶಿಸಿಲಾಗಿದೆ.

 ಕೌಶಲ್ ಮತ್ತು ಉದ್ಯೋಗ ಮೇಳ
      ಪಿಎಂಕೆವಿವೈ ಯಶಸ್ಸಿಗೆ ಸಾಮಾಜಿಕ ಮತ್ತು ಸಮುದಾಯ ಕ್ರೋಢಿಕರಣವು ಅತ್ಯಂತ ನಿರ್ಣಾಯಕವಾಗಿದೆ. ಸಮುದಾಯದ ಸಕ್ರಿಯ ಭಾಗವಹಿಸುವಿಕೆಯು ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತ್ರಿಗೊಳಿಸುತ್ತದೆ ಮತ್ತು ಉತ್ತಮ ಕಾರ್ಯಕ್ಕಾಗಿ ಸಮುದಾಯದ ಸಂಚಿತ ಜ್ಞಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತರಬೇತಿ ಸಂಸ್ಥೆಗಳು ಪ್ರತಿ ಆರು ತಿಂಗಳಿಗೊಮ್ಮೆ ಕೌಶಲ್ ಮತ್ತು ಉದ್ಯೋಗ ಮೇಳಗಳನ್ನು ಪತ್ರಿಕಾ / ಮಾಧ್ಯಮ ಪ್ರಸಾರದೊಂದಿಗೆ ನಡೆಸಲಾಗುತ್ತದೆ.

 ಈ ಯೋಜನೆಯನ್ನು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ಮೂಲಕ ಜಾರಿಗೆ ತರಲಾಗಿದೆ.

×
ABOUT DULT ORGANISATIONAL STRUCTURE PROJECTS